ಹೈದರಾಬಾದ್(ಮಾ:15): ಬಾಹುಬಲಿ ಚಿತ್ರದ ನಂತರ ಎಸ್ ಎಸ್ ರಾಜಮೌಳಿ ಅವರ ಮುಂದಿನ ಚಿತ್ರ ಮಹಾಭಾರತ ಎಂದು ಹೇಳಲಾಗುತ್ತಿತ್ತು,ಬಾಹುಬಲಿ ನಂತರ ಮಹಾಭಾರತ ಸಿನಿಮಾ ಆರಂಭವಾಗುತ್ತದೆ ಎಂದು ನಾನು ಎಂದೂ ಎಲ್ಲಿಯೂ ಹೇಳಿಕೊಂಡಿಲ್ಲ,ಅದು ನನ್ನ ಡ್ರೀಮ್ ಪ್ರಾಜೆಕ್ಟ್ ಎಂದು ಮಾತ್ರ ನಾನು ಹೇಳಿದ್ದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಆಸೆಯನ್ನು ನಿರಾಸೆ ಮಾಡಿದ್ದಾರೆ.

ಅಭಿಮಾನಿಗಳು ಫಿಕ್ಸ್ ಆಯಾಗಿದ್ದರೆ ಆದರೆ ನಾನು ಅದರ ಬಗ್ಗೆ ಯೋಚನೆ ಮಾಡಿಲ್ಲ,ಒಂದು ವೇಳೆ ಮಹಾಭಾರತ ಸಿನಿಮಾ ಮಾಡಿದರೆ ಅದು ನನ್ನ ಕೊನೆಯ ಚಿತ್ರವಾಗಬಹುದು,ನನ್ನ ಸಿನಿ ಜೀವನದ ಕೊನೆಯ ಚಿತ್ರ ಅದಾಗಬಹುದು,ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.