ಬೆಂಗಳೂರು(ಜೂ:05): ಜಿಂದಾಲ್ ಗೆ 3,667 ಎಕರೆ ಭೂಮಿ ಮಾರಾಟ ಮಾಡುವುದನ್ನು ಖಂಡಿಸುತ್ತೇನೆ, ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯನ್ನು ಜಿಂದಾಲ್ ಗೆ ಮಾರಾಟ ಮಾಡಲು ವಿರೋಧವಿದೆ. ಬೇಕಿದ್ದರೆ ಭೂಮಿಯನ್ನು ಲೀಸ್ ಮೇಲೆ ಕೊಡಲಿ, ಹೆಚ್.ಕೆ ಪಾಟೀಲ್ ಅವರೂ ಸಹ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಖಂಡಿಸಿದ್ದಾರೆ.

ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಇಂದಿನ ಶಾಸಕರ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಬಿಜೆಪಿ ಇಂದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ರಾಜ್ಯದ ಮತದಾರರು ಜಾಗೃತರಾಗಿದ್ದಾರೆ, ಬುಡುಬುಡಿಕೆ ನಾಟಕವನ್ನು ಜನರು ಒಪ್ಪುವುದಿಲ್ಲ, ಸಿಎಂ ಗೆ ರಾಜ್ಯದಲ್ಲಿನ ಬರಗಾಲ ಅರ್ಥವಾಗುತ್ತಿಲ್ಲ, ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದ್ದು,ಈಗ ಶಾಲೆಗೆ ಹೋಗಿ ವಾಸ್ತವ್ಯ ಮಾಡುತ್ತಿದ್ದಾರೆ, ಹಿಂದೆ ಸಿಎಂ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳು ಉದ್ದಾರ ಆಗಿದೆಯಾ ? ಗ್ರಾಮಗಳ ಅಭಿವೃದ್ಧಿಗೆ ಕೋಟಿ ರೂ. ಹಣ ಕೊಡುವುದಾಗಿ ಬುರುಡೆ ಬಿಟ್ಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.