ಬೆಳಗಾವಿ(ಅ.04) ನಾನು ಕೂಡ ಪ್ರವಾಹ ಸಂತ್ರಸ್ತ, ನನಗೆ ಪರಿಹಾರ ಕೊಟ್ಟರೆ 1 ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎಂದು ರಾಜ್ಯದ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಯನ್ನು ನೀಡಿದ್ದಾರೆ. ಡಿಸಿಎಂ ಸವದಿಯವರ ಹೇಳಿಕೆಯನ್ನು ಕೇಳಿದ ಸಂತ್ರಸ್ತರು ಡಿಗ್ಬ್ರಾಂತರಾಗಿದ್ದರೆ.

ಸ್ವತಃ ಸವದಿಯವರೇ ನನ್ನ 100 ಎಕರೆ ಬೆಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಎಂದು ಬೆಳಗಾವಿಯಲ್ಲಿ ಭಾಷಣದ ವೇಳೆ ತಿಳಿಸಿದರು. ಬಳಿಕ ಅಥಣಿಯ ದರೂರಿನಲ್ಲಿ 80 ಎಕರೆ ಬೆಳೆ ನಾಶವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.