ಬೆಂಗಳೂರು(ಜುಲೈ.16) ನಟ, ನಿರ್ಮಾಪಕ, ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದ್ವಾರಕೀಶ್ ಇನ್ನಿಲ್ಲ ಎಂಬ ವದಂತಿ ಹಬ್ಬಿದ್ದು, ಅದು ಸುಳ್ಳು ಎಂದು ಸ್ವತಃ ದ್ವಾರಕೀಶ್ ಅವರೇ ಸ್ಪಷ್ಟನೆ ನೀಡಿ ವಿಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಕರ್ನಾಟಕದ ಕುಳ್ಳ ದ್ವಾರಕೀಶ್ ಅವರು ಇನ್ನಿಲ್ಲ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ಇದನ್ನು ನೋಡಿದ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಆದರೆ, ಇದು ಕೇವಲ ವದಂತಿ, ನಾನು ಇನ್ನೂ ಬದುಕಿಯೇ ಇದ್ದೇನೆ ಎಂದು ದ್ವಾರಕೀಶ್ ಅವರೇ ಸ್ಪಷ್ಟಪಡಿಸಿದ್ದಾರೆ.

ದ್ವಾರಕೀಶ್ ಅವರು, ನಮಸ್ಕಾರ, ನಾನು ನಿಮ್ಮ ದ್ವಾರಕೀಶ್, ಕನ್ನಡದ ಕುಳ್ಳು ಆರೋಗ್ಯವಾಗಿದ್ದೇನೆ. ಹುಷಾರಾಗಿ ಇದ್ದೀನಿ. ಯಾವ ತರಹದ ಸುಳ್ಳು ವದಂತಿಗಳಿಗೆ ನಿಗಾ ಕೊಡಬೇಡಿ. ಏನೇ ಅದರೂ ನಿಮಗೆ ಗೊತ್ತಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ನಿಮ್ಮ ದ್ವಾರಕೀಶ ಚೆನ್ನಾಗಿದ್ದಾ