ಮುಂಬೈ(ಜ.17): ಬಾಲಿವುಡ್ ನಟ ಅನಿಲ್ ಕಪೂರ್ ಪ್ರಧಾನಿ ನರೇಂದ್ರ ಮೋದಿಯರನ್ನು ಬುಧವಾರ ದೆಹಲಿಯಲ್ಲಿ ಭೇಟಿಯಾಗಿದ್ದಾರೆ.

ಟ್ವೀಟರ್ ನಲ್ಲಿ ಮೋದಿ ಜೋತೆಗಿನ ಫೋಟೊವನ್ನು ಶೇರ್ ಮಾಡಿರುವ ಅನಿಲ್, ಪ್ರಧಾನಿಯನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದಗಳು, ಮೋದಿಯವರ ಜೊತೆ ಮಾತನಾಡಿದ ನಂತರ ನಾನು ವಿನೀತನಾಗಿದ್ದೇನೆ. ಅವರ ಮಾತುಗಳು ನನಗೆ ಸ್ಪೂರ್ತಿ ನೀಡಿವೆ. ಅವರ ಭೇಟಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ಯುವ ಬಾಲಿವುಡ್ ನಟರು ಮತ್ತು ಚಲನಚಿತ್ರ ತಯಾರಕರ ನಿಯೋಗವು ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿಯಾಗಿದ್ದರು. ರಣ್ವೀರ್ ಸಿಂಗ್, ರಣಬೀರ್ ಕಪೂರ್, ವರುಣ್ ಧವನ್, ಅಲಿಯಾ ಭಟ್, ಭೂಮಿ ಪೆಡ್ನೆಕರ್, ಸಿಧಾರ್ಥ್ ಮಲ್ಹೋತ್ರಾ, ಆಯುಶ್ಮಾನ್ ಖುರ್ರಾನಾ, ರಾಜುಕುಮಾರ್ ರಾವ್, ವಿಕಿ ಕೌಶಲ್ ಮತ್ತು ನಿರ್ದೇಶಕ ಕರಣ್ ಜೋಹರ್, ಏಕ್ತಾ ಕಪೂರ್, ಅಶ್ವಿನಿ ಐಯರ್ ತಿವಾರಿ ಮತ್ತು ರೋಹಿತ್ ಶೆಟ್ಟಿ ಭೇಟಿಯಾಗಿದ್ದರು