ಬೆಂಗಳೂರು(ಜೂನ್.13) ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಕೇಳಿಬರುತ್ತಿದ್ದು, ಅಂಕಿ-ಅಂಶಗಳ ಪ್ರಕಾರ ರೂ. 20 ಸಾವಿರ ಕೋಟಿ ಮಾತ್ರ ಬಾಕಿ ಇದೆ ಎನ್ನಲಾಗಿದೆ.

ಸರ್ಕಾರಕ್ಕೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ರೂ. 20 ಸಾವಿರ ಕೋಟಿ ಮಾತ್ರ ಇರುವುದು ಎನ್ನಲಾಗಿದೆ. ಆದರೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಚಿವರು ರೂ.46 ಸಾವಿರ ಕೋಟಿ ಸಾಲಮನ್ನಾ ಎಂದಿದ್ದರು.

ಬ್ಯಾಂಕ್ ಗಳ ಪ್ರಕಾರ ಸಾಲಮನ್ನಾ ಇರೋದು ರೂ. 20 ಸಾವಿರ ಕೋಟಿ ದಾಟಿಲ್ಲ ಎನ್ನಲಾಗಿದೆ. ರಾಜ್ಯ ಸರ್ಕಾರ ಮೊದಲು ಹೇಳಿದ್ದೊಂದು ಮಾಡಿದ್ದೊಂದು. ಈ ಹಿಂದೆ 46 ಸಾವಿರ ಕೋಟಿ ಎಂದು ಸರ್ಕಾರ ಹೇಳಿತ್ತು. ಸಿಎಂ ಸೇರಿದಂತೆ ಸಚಿವರು ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದರು. ಹಾಗಾದರೆ 46 ಸಾವಿರ ಕೋಟಿ ಮೊತ್ತ ಹೇಳಿಕೆ ಸುಳ್ಳಾಯಿತಾ? ಎಂಬ ಪ್ರಶ್ನೆ ಮೂಡಿದೆ.