ಮಂಡ್ಯ(ಮಾ,16): ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇದ್ದು, ಮಾಜಿ ಸಂಸದೆ ರಮ್ಯಾರನ್ನು ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಸ್ಟೂಟೆಂಡ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜೀವ್ ತಮ್ಮ ಸೋಲಿನ ನೋವು ನನ್ನ ಮನಸಲ್ಲಿ ಇನ್ನೂ ಇದೆ, ಮರಿಯೋಕೆ ಆಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಇನ್ನು ರಾಜೀವ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಪೋಸ್ಟ್ ಗೆ ನೆಟ್ಟಿಗರು ರಮ್ಯಾ ಸೋಲಿಗೆ ಯಾರು ರಾಜಕೀಯ ತಾನೇ ಕಾರಣ ರಾಜಕೀಯ ತಾನೇ ಎಂದು ಪ್ರಶ್ನಿಸಿ ಕಮೆಂಟ್‍ಗಳನ್ನು ಮಾಡುತ್ತಿದ್ದಾರೆ.