ಜೇನು ತುಪ್ಪದ ಸೇವನೆಯಿಂದ ರಕ್ತದ ಶದ್ದೀಕರಣಕ್ಕೆ ಒಳಿತಾಗುತ್ತದೆ. ಜೇನು ತಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿಯುದರಿಂದ ಕೆಂಪು ರಕ್ತದ ಕಣಗಳ ಸಂಖ್ಯೆಯ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಜೊತೆಗೆ ಬೆಚ್ಚಗಿನ ನೀರಿನ ಜೊತೆ ಜೇನು ತುಪ್ಪ ಬೆರೆಸಿ ಕುಡಿದರೆ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ.

ಅಧಿಕ ರಕ್ತದೊತ್ತಡದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುವುದು ಸಂಶೋಧನೆಯಿಂದ ತಿಳಿದು ಬಂದಿದೆ. ದಿನಕ್ಕೆ ಎರಡು ಬಾರಿ ಎರಡು ಚಮಚ ಜೇನು ತುಪ್ಪದ ಸೇವನೆಯಿಂದ ಬಿಳಿ ರಕ್ತಕಣಗಳು ಕಡಿಮೆಯಾಗುವ ಅಪಾಯದಿಂದ ದೂರವಿರಬಹುದು. ಹೀಗೆ ಜೇನು ತುಪ್ಪದ ಸೇವನೆಯಿಂದ ದೇಹದ ರಕ್ತಕ್ಕೆ ಒಳಿತಾಗುತ್ತದೆ.