ನವದೆಹಲಿ(ಫೆ.28): ಎರಡು ರಾಷ್ಟ್ರಗಳೊಂದಿಗೆ ನಾವು ತುಂಬಾ ಆತ್ಮೀಯತೆಯಿಂದಲೇ ಮಾತುಕತೆ ನಡೆಸುತ್ತಿದ್ದೇವೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಯುದ್ಧ ಮಾಡುವ ದಿಕ್ಕಿನಲ್ಲಿ ಸಾಗುತ್ತಿದ್ದವು. ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಎರಡೂ ದೇಶಗಳ ಸಮಸ್ಯೆಯನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ. ಶೀಘ್ರದಲ್ಲೇ ಸಮಾಧಾನಕರ ಸುದ್ದಿ ಸಿಗುವ ಮೂಲಕ ಉಂಟಾಗಿರುವ ಬಿಕ್ಕಟ್ಟು ಪೂರ್ಣಗೊಳ್ಳುವ ಸೂಚನೆಯನ್ನು ನೀಡಿದ್ದಾರೆ.

ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ದಾಳಿ ನಡೆಸಿ ನಾಶ ಪಡಿಸಿದ ಬಳಿಕ ಭಾರತದ ಬೆಂಬಲಕ್ಕೆ ನಿಂತಿದ್ದ ಅಮೆರಿಕ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶದ ರವಾನೆ ಮಾಡಿತ್ತು. ಪಾಕಿಸ್ತಾನ ಮಿಲಿಟರಿ ಕಾರ್ಯಾಚರಣೆ ನಡೆಸದೆ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಇಲ್ಲವಾದರೆ ಹೆಚ್ಚಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಕಾರ್ಯದರ್ಶಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದ್ದರು.

ಉತ್ತರ ಕೊರಿಯಾದೊಂದಿಗೆ ಅಮೆರಿಕ ನಡೆಸುತ್ತಿದ್ದ ಶೃಂಗಸಭೆ ಅಂತ್ಯವಾಗಿದ್ದು, ಯಾವುದೇ ಒಪ್ಪಂದ ಇಲ್ಲದೇ ಚರ್ಚೆಗಳು ಅಂತ್ಯವಾಗಿದೆ. ಉತ್ತರ ಕೊರಿಯಾ ವಿಧಿಸಿದ್ದ ನಿರ್ಬಂಧಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣ ಶೃಂಗ ಸಭೆ ಅಂತ್ಯವಾಗಿದೆ. ಉತ್ತರ ಕೊರಿಯಾ ಸಾಧ್ಯವಾಗದಂತಹ ಒಪ್ಪಂದಗಳನ್ನ ಮುಂದಿಟ್ಟಿದೆ. ಅಲ್ಲದೇ 3ನೇ ಶೃಂಗ ಸಭೆ ನಡೆಸಲು ಉದ್ದೇಶಿಸಿಲ್ಲ. ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಮುಂದುವರಿಸಲು ಮತ್ತಷ್ಟು ಬಯಸುತ್ತೇವೆ ಎಂದು ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.