ಪ್ರಯಾಗರಾಜ್(ಜ:17): ಕುಂಭಮೇಳದಲ್ಲಿ ಬುಧವಾರ ಇತಿಹಾಸವೊಂದು ಸೃಷ್ಟಿಯಾಗಿದೆ. ಹತ್ತು ವರ್ಷಗಳಿಂದ ಕುಂಭಮೇಳದ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಲು ಇಚ್ಛಿಸಿದ್ದ ತೃತೀಯ ಲಿಂಗಿಗಳ ಮಹದಾಸೆ ಕೊನೆಗೂ ಈಡೇರಿದೆ.

ಇಲ್ಲಿಯವರೆಗೂ ಕುಂಭಮೇಳದಲ್ಲಿ ಯಾವುದೇ ತೃತೀಯ ಲಿಂಗಿಗಳು ಭಾಗವಹಿಸಿರಲಿಲ್ಲ,ಆದ್ದರಿಂದ ಇದಕ್ಕಾಗಿ ಹತ್ತು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಕಳೆದ ವರ್ಷ ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ತೃತೀಯ ಲಿಂಗಿಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.

ಕುಂಭಮೇಳಕ್ಕೆ ಬಂದಿದ್ದ ತೃತೀಯ ಲಿಂಗಿಗಳಿಗೆ ಜನರು ಕೈ ಮುಗಿದು,ಕಾಲಿಗೆ ಬಿದ್ದು ಆಶೀರ್ವಾದ ಬೇಡಿ ಅವರ ಬಳಿ ನಾಣ್ಯವನ್ನು ಮಂತ್ರಿಸಿಕೊಂಡು ಹೋಗುವ ದೃಶ್ಯ ಕಂಡು ಬಂದಿತು.