ಚಿಕ್ಕಮಗಳೂರು(ಆಗಸ್ಟ್.17) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಉತ್ತಿನಕೊಳಲು ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ರಸ್ತೆ ಬದಿಯ ಗುಡ್ಡ ಕುಸಿದು 33 ಎಕರೆಯಷ್ಟು ಜಮೀನು ನಾಶವಾಗಿದ್ದಲ್ಲದೇ, 4 ದಿನಗಳ ಕಾಲ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವಂತಾಯಿತು.

ಸಂಪರ್ಕ ಸಿಕ್ಕ ಬಳಿಕ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ . ಗೌತಮ್ ಬುಗಾದಿ ಮೂಡಿಗೆರೆ ಶಾಸಕರಾದ ಎಂಪಿ ಕುಮಾರಸ್ವಾಮಿ ಇನ್ನು ಮುಂತಾದ ಅಧಿಕಾರಿಗಳಿಗೆ ಕರೆ ಮಾಡಿದರೂ ಕರೆ ಸ್ವೀಕರಿಸದೆ ಇರುವುದು ಗ್ರಾಮಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಆ ಗ್ರಾಮದಲ್ಲಿ 3 ಜನ ಗರ್ಭಿಣಿಯರಿದ್ದು, ಹಲವಾರು ವೃದ್ಧರಿಗೆ ವೈದ್ಯಕೀಯ ಸೌಲಭ್ಯವಿಲ್ಲದೆ ಪರದಾಡುವಂತಾಯಿತು. ಉತ್ತಿನಕೊಳಲು ಗ್ರಾಮಸ್ತರ ಪರವಾಗಿ ತಮ್ಮಣ್ಣಗೌಡ ಹಾಗು ಬೆಂಗಳೂರಿನ ಫಿಡೆಲಿಟಸ್ ಕಾರ್ಪ್ ಕಂಪನಿಯ ಉದ್ಯೋಗಿ ಶ್ವೇತನ್ ಧನಿ ಎತ್ತಿ ಮಾಧ್ಯಮದಿಂದ ಸಹಾಯ ಪಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.