ಬೆಂಗಳೂರು:(ಜೂನ್06): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 1 ಸೀಟ್ ಗೆದ್ದಿದ್ದು, ಮುಂದೆ ಪಕ್ಷವನ್ನು ಬಲಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ಕೆಪಿಸಿಸಿಯ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಲು ಹೈಕಮಾಂಡ್ ಮುಂದಾಗಿದ್ದು, ಡಿ.ಕೆ. ಶಿವಕುಮಾರ್‍ಗೆ ಈ ಸ್ಥಾನವನ್ನು ನೀಡಲು ಚಿಂತನೆ ನಡೆಸಲಾಗುತ್ತಿದೆ. ಈ ವಿಚಾರವನ್ನು ಡಿಕೆಶಿಯ ಗಮನಕ್ಕೆ ತರಲಾಗಿದ್ದು, ಸದ್ಯಕ್ಕೆ ಯಾವುದೇ ಜವಬ್ದಾರಿ ಬೇಡ ಎಂದು ಹೇಳಿಕೆ ನೀಡಿದ್ದಾರೆ.

ನನಗೆ ನನ್ನದೆಯಾ ಕೆಲವು ಸಮಸ್ಯೆಗಳಿವೆ, ನಾನು ಈಗ ಪಕ್ಷದ ಸಚಿವನಾಗಿಯೇ ಮುಂದುವರೆಯುತ್ತೇನೆ, ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲ ಇದರಿಂದ ಪಕ್ಷದ ಜವಬ್ದಾರಿ ಬೇಡ ಎಂದಿದ್ದಾರೆ.