ದೆಹಲಿ(ಫೆ18): ಪುಲ್ವಾಮದಲ್ಲಿ ಉಗ್ರರು ನಡೆಸಿದ ಭಯೋತ್ಪಾದನ ಕೃತ್ಯಕ್ಕೆ ಭಾರತದಲ್ಲಿ ಪಾಕ್ ವಿರುದ್ಧ ಭಾರೀ ವಿರೋಧಗಳು ವ್ಯಕ್ತವಾಗುತ್ತಿದ್ದಂತೆ, ಭಾರತದಲ್ಲಿದ್ದ ಪಾಕ್‍ನ ಹೈ ಕಮಿಷನರ್‍ನನ್ನು ವಾಪಾಸ್ ಕರೆಸಿಕೊಂಡಿದೆ.

ಭಾರತದಲ್ಲಿ ಪಾಕ್‍ನ ಹೈ ಕಮಿಷನರ್ ಸೊಹೈಲ್ ಮೊಹಮ್ಮದ್ ಅವರನ್ನು ದೇಶಕ್ಕೆ ಹಿಂದಿರುಗುವಂತೆ ಸೂಚನೆ ನೀಡಲಾಗಿದೆ ಎಂದು ಪಾಕ್‍ನ ವಿದೇಶಾಂಗ ಅಧಿಕಾರಿಗಳ ವಕ್ತಾರ ಮೊಹಮ್ಮದ್ ಫೈಸಲ್ ಟ್ವೀಟ್ ಮಾಡಿದ್ದಾರೆ. ಇನ್ನು ಪಾಕಿಸ್ತಾನದಲ್ಲಿರುವ ಭಾರತದ ಹೈ ಕಮಿಷನರ್ ಅಜತ್ ಬಿಸರಿಯಾ ಅವರನ್ನು ಕೂಡ ಭಾರತಕ್ಕೆ ಮರಳುವಂತೆ ತಿಳಿಸಲಾಗಿದೆ.

ಇನ್ನು ಸಮಾಲೋಚನೆ ನಡೆಸುವ ಸಲುವಾಗಿ ಭಾರತದಲ್ಲಿದ್ದ ಹೈ ಕಮಿಷನರ್‍ರವರನ್ನು ದೇಶಕ್ಕೆ ಮರಳುವಂತೆ ಹೇಳಿದ್ದೇವೆ ಹಾಗೆಯೇ ಇನ್ನು ಮುಂದೆ ದಾಳಿಯಾಗದಂತೆ ತಡೆಯಲು ಎಲ್ಲಾ ಬೆಂಬಲವನ್ನು ನೀಡುತ್ತೇವೆ ಎನ್ನಲಾಗುತ್ತಿದೆ.