ಶಿವಮೊಗ್ಗ(ಜ:16): ಜನವರಿ 23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾಢ್ರ್ಯ ಸ್ಪರ್ಧೆ, ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಹೆಲಿಟೂರಿಸಂ: ಶಿವಮೊಗ್ಗ ನಗರದ ವೈಮಾನಿಕ ಪ್ರವಾಸಕ್ಕಾಗಿ ಉತ್ಸವದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. 8ನಿಮಿಷಕ್ಕೆ 2.5ಸಾವಿರ ರೂ, 10 ನಿಮಿಷಕ್ಕೆ 3ಸಾವಿರ ರೂ ಹಾಗೂ 1ಗಂಟೆ 10ನಿಮಿಷಗಳ ಜೋಗ್ ಪ್ಯಾಕೇಜ್‍ಗೆ 20ಸಾವಿರ ರೂ. ನಿಗದಿಪಡಿಸಲಾಗಿದೆ. ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಟೇಕಾಫ್ ಆಗಲಿದೆ ಎಂದರು.

ಟಾಂಗ್ ಟೂರ್: ಶಿವಮೊಗ್ಗ ನಗರದಲ್ಲಿ ಪ್ರವಾಸಿ ತಾಣಗಳಿಗೆ, ಕಾರ್ಯಕ್ರಮದ ಮುಖ್ಯ ವೇದಿಕೆಗೆ ಸೇರಿದಂತೆ ಇನ್ನಿತರ ಕಡೆಗಳಿಗೆ ಸಾರ್ವಜನಿಕರನ್ನು ಕರೆದೊಯ್ಯಲು ಟಾಂಗಾ ಟೂರ್ ವ್ಯವಸ್ಥೆ ಮಾಡಲಾಗಿದೆ. ಆಲಂಕೃತವಾಗಿರುವ ಟಾಂಗಾಗಳು ನೆಹರು ಮೈದಾನ ಬಳಿ ಲಭ್ಯವಿರಲಿದೆ ಎಂದರು.

ನೋಂದಣಿಗೆ ಮನವಿ: ಕ್ರೀಡೆಗಳ ಕುರಿತಾದ ಮಾಹಿತಿ ಹಾಗೂ ನೋಂದಣಿಗಾಗಿ ಲೋಕೇಶ್ 9483778002, ಉದ್ಯೋಗ ಮೇಳಕ್ಕೆ ಸಂಬಂಧಿಸಿದಂತೆ ಶಿವಲಿಂಗು 8762778402, 08182-255293, ಹೆಲಿಟೂರ್ ಬುಕ್ಕಿಂಗ್‍ಗಾಗಿ ಚಂದನ್ 9742038039, ಬಸ್‍ಟೂರ್‍ಗಾಗಿ ದರ್ಶನ್ 9591522903 ಸಂಪರ್ಕಿಸಿ ಬುಕ್ಕಿಂಗ್ ಮಾಡುವಂತೆ ಅವರು ಕೋರಿದರು.