ಮುಂಬೈ:(ಜು.24): ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಅಲ್ಲಿನ ಜನ ಜೀವನ ಸಂಪೂರ್ಣ ಅಸ್ಥವ್ಯಸ್ತವಾಗಿದೆ.

ಇನ್ನೂ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸಂಚಾರರಿಗೆ ಸಮಸ್ಯೆ ತಲೆದೋರಿದೆ.

ರಸ್ತೆಗಳು ಜಲಾವೃತವಾದ ಕಾರಣ ಅಪಘಾತಗಳು ಕೂಡ ಸಂಭವಿಸುತ್ತಿದೆ. ವಾಹನ ಸಂಚಾರರು ಮಾತ್ರಾ ಸಮಸ್ಯೆ ಅನುಭವಿಸದೆ ಪಾದಚಾರಿಗಳು ಕೂಡ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿದ್ದಾರೆ.

ಈ ವರುಣನ ಆರ್ಭಟ ಇನ್ನೂ ಕೆಲವು ದಿನ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ವರುಣನ ಅಟ್ಟಹಾಸಕ್ಕೆ ಜನರು ಭಯಭೀತಿಯಿಂದ ಬದುಕುತ್ತಿದ್ದಾರೆ.