ಮುಂಬೈ:(ಜು.03): ಇಲ್ಲಿ ಸುಮಾರು 4-5 ದಿನಗಳಿಂದ ವರುಣನನ ಆರ್ಭಟ ಮುಂದುವರೆದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಭಾರೀ ಮಳೆಯಿಂದಾಗಿ ವಾಣಿಜ್ಯ ನಗರಿಯಲ್ಲಿ ರಸ್ತೆ, ಪಾರ್ಕ್, ಚರಂಡಿಯಲ್ಲಿ ನೀರು ತುಂಬಿ ಹರಿಯುತ್ತಿದೆ.

ಮಳೆಯಿಂದಾಗಿ ಆಸ್ಪತ್ರೆಗೆ ತಲುಪಲು ಅಸಾಧ್ಯವಾಗಿ, ಗರ್ಭಿಣಿ ಮಹಿಳೆಯೊಬ್ಬರು ಡೊಂಬಿವ್ಲಿ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಮಹಿಳೆಗೆ ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಈ ವೇಳೆ ತಕ್ಷಣ ಅಲ್ಲಿ ನೆರೆದ ಜನರು ಆಸ್ಪತ್ರೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಈ ವೇಳೆ ತಕ್ಷಣ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಬಂದು ತಪಾಸಣೆ ನಡೆಸಿ ಹೆರಿಗೆಗೆ ಮಾಡಿಸಿದ್ದು, ತಾಯಿ ಮತ್ತು ಮಗು ಸುರಕ್ಷಿತವಾಗಿದೆ.