ಮುಂಬೈ(ಜು.01): ಮುಂಬೈ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕನೇ ದಿನವೂ ಭಾರೀ ಮಳೆಯಾಗುತ್ತಲೇ ಇದ್ದು, ನಗರ ಸಂಪೂರ್ಣ ಜಲಾವೃತಗೊಂಡಿರುವ ಪರಿಣಾಮ ಸಂಚಾರ ದಟ್ಟನೆ ಮತ್ತು ರೈಲುಗಳ ಸಂಚಾರ ವಿಳಂಬವಾಗಿದೆ.

ಇನ್ನು ಪಾಲ್ವರ್ ನಲ್ಲಿ ನೀರು ಪ್ರವೇಶಿಸಿರುವ ಕಾರಣ ಮುಂಬೈ_ ವಲ್ಸಾದ್_ ಸೂರತ್ ವಿಭಾಗದ ರೈಲ್ವೆ ಸಂಚಾರವನ್ನು ರದ್ದು ಮಾಡಲಾಗಿದೆ.

ನೀರಿನ ಮಟ್ಟ ಕಡಿಮಾಯಾಗಿದ್ದ ಪರಿಣಾಮ , ಪಶ್ಚಿಮ ರೈಲ್ವೆಯನ್ನು ಬೆಳಿಗ್ಗೆ 8.05ಕ್ಕೆ ಪುನಃ ಪ್ರಾರಂಭಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸುರಕ್ಷತೆಗಾಗಿ ರೈಲು ವೇಗವನ್ನು ಗಂಟೆಗೆ 30 ಕಿ.ಮೀ ಗೆ ಸೀಮಿತಗೊಳಿಸಲಾಗಿದೆ.

ಖಾಸಗಿ ಹವಾಮಾನ ಮುನ್ಸೂಚಕ ಸ್ಕೈಮೆಟ್ ಪ್ರಕಾರ ಜುಲೈ 3ರ ರಾತ್ರಿಯಿಂದ ನಗರದಲ್ಲಿ ಮಳೆಯು ತಿವ್ರವಾಗಿರುತ್ತದೆ ಎನ್ನಲಾಗಿದೆ.