ಬೆಂಗಳೂರು(ಜುಲೈ.04) ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ವಿಶ್ವನಾಥ್ ಅವರಿಗೆ ಅಧ್ಯಕ್ಷಗಿರಿ ಮಾಡಲಾಗದೆ ರಾಜೀನಾಮೆ ಕೊಟ್ಟಿದ್ದಾನೆ. ಅವನ ಮಾತಿಗೆ ಏನಂಥ ಪ್ರತಿಕ್ರಿಯೆ ಕೊಡೋದು ಎಂದು ಸರಿಯಾಗಿ 6 ತಿಂಗಳು ಅಧಿಕಾರ ನಿರ್ವಹಿಸಲು ಆಗಲಿಲ್ಲ ಅವನಿಗೆ ಎಂದು ಏಕವಚನದಲ್ಲಿ ಮಾತನಾಡಿದ್ದರು.

ಸಿದ್ದರಾಮಯ್ಯನವರ ಈ ಮಾತಿಗೆ ಹೆಚ್. ವಿಶ್ವನಾಥ್ ಅವರು ಉತ್ತರಿಸಿದ್ದು, ನಾನು ಆರು ತಿಂಗಳು ನಡೆಸಿದ್ದಿನೋ ಎಷ್ಟು ದಿವಸ ನಡೆಸಿದ್ದೇನೋ ಅದು ಬೇರೆ, ಸಮನ್ವಯ ಸಮಿತಿಯಲ್ಲಿ ಎರಡು ಪಕ್ಷಗಳ ಅಧ್ಯಕ್ಷರು ಬಾರದಂತೆ ಸಿದ್ದರಾಮಯ್ಯ ಅವರು ತಡೆದಿದ್ದರೆ.

ಇದೇ ವೇಳೆ ಅವರು ಹೊಸದಾಗಿ ನೇಮಕವಾಗಿರುವ ಜೆಡಿಎಸ್‌ ಅಧ್ಯಕ್ಷರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ನೀಡಬೇಕು ಅಂತ ಹೇಳಿದರು. ಅವರಿಗೆ ಬಹುವಚನದಲ್ಲಿ ಮಾತನಾಡೋದೇ ಗೊತ್ತಿಲ್ಲ. ಎಲ್ಲರಿಗೂ ಸಂಧಿ ಪಾಠ ಮಾಡುತ್ತಾರೆ. ಅವರಿಗೆ ಏಕವಚನ, ಬಹು ವಚನದ ಬಗ್ಗೆ ಮಾತನಾಡುವುದು ಗೊತ್ತಿಲ್ಲ ಎಂದು ಹೇಳಿದರು. ಇನ್ನು ಅವರು ಏಕವಚನದಲ್ಲಿ ನಿಂದಿಸಿದರೆ ನನಗೆ ಬೇಸರವಿಲ್ಲ ಎಂದು ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.