ಬೆಳಗಾವಿ(ಮೇ.29) ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶ ಅದಾಗಲೇ ಬಂದಿದ್ದು. ಇದರಲ್ಲಿ ಬಿಜೆಪಿ ಸರ್ಕಾರವು ಬಹುಮತವನ್ನು ಸಾಧಿಸಿದೆ. ಕೇಂದ್ರದಲ್ಲಿಯೂ ತನ್ನದೇ ಸರ್ಕಾರವನ್ನು ರಚಿಸಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯು ಬಿಜೆಪಿಯ ಎನ್‍ಡಿಎ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೊಗಳಿ ಕೊಂಡಾಡಿದ್ದಾರೆ. ನರೇಂದ್ರ ಮೋದಿ 2ನೇ ಸಲವೂ ಭಾರಿ ಅಂತರದಿಂದ ಗೆದ್ದಿದ್ದಾರೆ. ಮೋದಿಗೆ ಸ್ವಹಿತಾಸಕ್ತಿ ಇಲ್ಲ, ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ದೇಶ ಸೇವೆಯಿಂದಾಗಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಿದ್ದಾರೆ.

ಮೋದಿ ಯಾವತ್ತೂ ದೇಶ ದೇಶವೆಂದು ದೇಶಕ್ಕಾಗಿಯೇ ಮಾತನಾಡುತ್ತಿರುತ್ತಾರೆ. ನೀವು, ನಾವು ಎಲ್ಲರೂ ದೇಶಕ್ಕಾಗಿ ದುಡಿಯಬೇಕೆಂದು ಮೋದಿ ಹೇಳುತ್ತಾರೆ. ಒಬ್ಬ ಪ್ರಧಾನಿ ಆದವರು ಸಂಸದನಂತೆ ಸರಳವಾಗಿ ಇರುತ್ತೇನೆ ಎನ್ನುತ್ತಾರೆ. ಮೋದಿಯೇ ಹೇಳಿದಂತೆ ಚಹಾ ಮಾರಿ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ದೇಶಕ್ಕಾಗಿ ನರೇಂದ್ರ ಮೋದಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದು ಭಾಷಣದುದ್ದಕ್ಕೂ ಮೋದಿಯನ್ನು ಹಾಡಿ ಹೊಗಳಿದ ಸಚಿವ ಜಿ.ಟಿ.ದೇವೇಗೌಡ.