ನವದೆಹಲಿ(ಜ:೦೨):ದೇಶದಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಜಿ ಎಸ್ ಟಿ ಸಂಗ್ರಹ 94,726 ಕೋಟಿ ರೂ.ಗಳಾಗಿದ್ದು ನವೆಂಬರ್ ತಿಂಗಳಲ್ಲಿ 97,637 ಕೋಟಿ ರೂ.ಗಳಾಗಿತ್ತು, ಈ ಮೂಲಕ ಸಂಗ್ರಹ ಕಡಿಮೆಯಾಗಿರುವುದು ಕಂಡು ಬಂದಿದೆ.

ಹೀಗಿದ್ದರೂ ಸಹ ಸೇಲ್ಸ್ ರಿಟರ್ನ್ಸ್ ಜಿ ಎಸ್ ಟಿ ಆರ್-೩ಬಿ ಸಲ್ಲಿಕೆ ಡಿಸೆಂಬರ್ ತಿಂಗಳಲ್ಲಿ 72.44 ಲಕ್ಷಕ್ಕೆ ಏರಿಕೆಯಾಗಿದೆ , ನವೆಂಬರ್ ತಿಂಗಳಲ್ಲಿ 69.6 ಲಕ್ಷ ರೂ. ದಾಖಲಾಗಿತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ .

ಡಿಸೆಂಬರ್ ನಲ್ಲಿ ಸಂಗ್ರಹವಾದ ಜಿ ಎಸ್ ಟಿ ಯು ನವೆಂಬರ್ ತಿಂಗಳ ಖರೀದಿ ಹಾಗೂ ಮಾರಾಟವನ್ನು ಬಿಂಬಿಸುತ್ತದೆ.