ನವದೆಹಲಿ(ಜ:15): ದೇಶದಾದ್ಯಂತ 71ನೇ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ದೇಶದ ದಿಟ್ಟ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವಿಟ್ಟರ್ ಮೂಲಕ ಭಾರತೀಯ ಸೇನೆಯ ಎಲ್ಲಾ ಪುರುಷ ಮತ್ತು ಮಹಿಳಾ ಯೋಧರಿಗೆ ಶುಭಾಷಯ ಕೋರಿದ್ದಾರೆ.

ಈ ಸೇನಾ ದಿನದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ನನ್ನ ತುಂಬು ಹೃದಯದ ಶುಭಾಶಯಗಳು.ನಮ್ಮ ಸ್ವಾತಂತ್ರ್ಯದ ರಕ್ಷಕರು ನೀವು,ಸೈನಿಕರು ಸದಾ ಜಾಗೃತರಾಗಿರುತ್ತಾರೆ ಎಂಬ ಕಾರಣಕ್ಕೆ ನಾಗರೀಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.