ಬೆಂಗಳೂರು(ಅ.23) ಕರೋನ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು 6 ತಿಂಗಳ ಬಳಿಕ ನವೆಂಬರ್ 17ರಿಂದ ಮತ್ತೆ ಪ್ರಾಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ವೈದ್ಯಕೀಯ, ಡಿಪ್ಲೊಮಾ ಕಾಲೇಜುಗಳು ನ.17ರಿಂದ ರಾಜ್ಯಾದ್ಯಂತ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಬರಲೇಬೇಕೆಂಬ ನಿಯಮ ಇಲ್ಲ. ಪೋಷಕರ ಅನುಮತಿ ಪಡೆದುಕೊಂಡು ತರಗತಿಗಳಿಗೆ ಹಾಜರಾಗಬಹುದಾಗಿದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿಗೆ ಬರಬೇಕೆಂದು ನಿಯಮಗಳು ಏನು ಇಲ್ಲ. ಪಾಲಕರ ಅನುಮತಿಯನ್ನು ತೆಗೆದುಕೊಂಡು ಅವರ ಸಲಹೆಯ ಮೇರೆಗೆ ಬರಬಹುದಾಗಿದೆ, ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.