ಬೆಂಗಳೂರು:(ಜ25): ರಾಜ್ಯ ಸರ್ಕಾರವು ನಾಲ್ಕು ಜನ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಮೈಸೂರು ನಗರ ಪೋಲಿಸ್ ಆಯುಕ್ತರಾಗಿ ಕೆ.ಟಿ. ಬಾಲಕೃಷ್ಣ, ಹುಬ್ಬಳ್ಳಿ ಮತ್ತು ಧಾರವಾಡ ನಗರ ಪೋಲಿಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್ ಅವರನ್ನು, ಬೆಳಗಾವಿ ನಗರದ ಪೊಲೀಸ್ ಆಯುಕ್ತರಾಗಿ ಪಿ. ರಾಜೇಂದ್ರ ಪ್ರಸಾದ್‍ರನ್ನು ಜೊತೆಗೆ ಯೋಜನೆ ಹಾಗು ಆಧುನೀಕರಣದ ವಿಭಾಗದ ಡಿಐಜಿಯಾಗಿ ಆರ್.ರಮೇಶ್‍ರವರನ್ನು ನೇಮಕ ಮಾಡಲಾಗಿದೆ.

ಈ ನಾಲ್ಕು ಜನರ ಅಧಿಕಾರಿಗಳ ಪೈಕಿ ಕೆಲವರಿಗೆ ಸರ್ಕಾರ ಬಡ್ತಿಯನ್ನು ನೀಡಿ ವರ್ಗಾವಣೆ ಮಾಡಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಮುಂದಾಗಿದೆ.