ಗೂಗಲ್ ಪ್ಲಸ್ ಸೇವೆ ಶೀಘ್ರದಲ್ಲೇ ಸ್ಥಗಿತ

(ಫೆ:07): ಗೂಗಲ್ ಸಂಸ್ಥೆಯ ಅಂಗ ಘಟಕವಾದ ಗೂಗಲ್ ಪ್ಲಸ್ ಸೇವೆ ಇನ್ನು ಕೆಲವೇ ದಿನಗಳಲ್ಲಿ ರದ್ದಾಗಲಿದೆ. ಆದ್ದರಿಂದ ಇದರಲ್ಲಿ ಎಲ್ಲಾ ಮಾಹಿತಿಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬೇಕು ಇಲ್ಲವಾದಲ್ಲಿ ಅವು ಸಂಪೂರ್ಣವಾಗಿ ಡಿಲೀಟ್ ಆಗುತ್ತವೆ.

ಗೂಗಲ್ ಸಂಸ್ಥೆಯ ಸಾಮಾಜಿಕ ಜಾಲತಾಣದ ಘಟಕವಾದ ಗೂಗಲ್ ಪ್ಲಸ್ ಏಪ್ರಿಲ್ 2ರಂದು ರದ್ದಾಗಲಿದೆ. ಈಗಾಗಲೇ ಇದರಲ್ಲಿ ಅಪ್ ಲೋಡ್ ಮಾಡಿರುವ ಫೋಟೋ ಆಲ್ಬಮ್ ವಿಡಿಯೋಗಳು ನಾಶವಾಗಲಿವೆ. ಆದ್ದರಿಂದ ಅದರಲ್ಲಿ ಹಾಕಿರುವ ಎಲ್ಲವುಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು.ಅಂದರೆ ಈಗಾಗಲೇ ಗೂಗಲ್ ಪ್ಲಸ್ ಪೇಜ್ ಗೂಗಲ್ ಪ್ಲಸ್ ಆಲ್ಬಮ್ ನಲ್ಲಿರುವ ಫೋಟೋ ವಿಡಿಯೋಗಳು ಡಿಲೀಟ್ ಆಗಲಿವೆ.

ಆದರೆ ಗೂಗಲ್ ಖಾತೆಯಲ್ಲಿ ಲಿಂಕ್ ಇರುವ ಇತರ ಸೇವೆಗಳು ಮುಂದುವರಿಯಲಿವೆ .ಗೂಗಲ್ ಪ್ಲಸ್ ಮಾತ್ರ ಸ್ಥಗಿತಗೊಳ್ಳಲಿದೆ.ಅದರಿಂದ ಗೂಗಲ್ ಖಾತೆ ಗೆ ಲಾಗ್ ಇನ್ ಆಗಿ ಮಾಹಿತಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳುವುದು ಸೂಕ್ತ. ಗೂಗಲ್ ಪ್ಲಸ್ ನಲ್ಲಿರುವ ಯಾವ ಮಾಹಿತಿಗಳು ಬೇಕೋ ಅದನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ ಆಮೇಲೆ ಮಾಹಿತಿಗಳನ್ನು ಯಾವ ಫಾರ್ಮೆಟ್ ನಲ್ಲಿ Archive ಮಾಡಿಕೊಳ್ಳಬೇಕು ಎಂದು ಆಯ್ಕೆ ಮಾಡಿ ಇಟ್ಟುಕೊಳ್ಳುವುದು ಸೂಕ್ತವಾಗಿದೆ ಎಂದು ಮಾಹಿತಿ ತಂತ್ರಜ್ಞರು ತಿಳಿಸಿದ್ದಾರೆ.