ಮುಂಬೈ(ಜೂನ್.22) ಬಾಲಿವುಡ್ ನ ಯಶಸ್ವಿ ಸಿನಿಮಾ `ಮಿಸ್ಟರ್ ಇಂಡಿಯಾ’ದಲ್ಲಿ ಮೊಗ್ಯಾಂಬೋ ಪಾತ್ರವನ್ನು ಮಾಡಿದ ಅಮರೀಶ್ ಪುರಿಯವರು ಯಾರಿಗೆ ನೆನಪಿಲ್ಲ ಹೇಳಿ, ಅವರ ಮಿಸ್ಟರ್ ಇಂಡಿಯಾ ಚಿತ್ರದಲ್ಲಿ `ಮೊಗ್ಯಾಂಬೋ ಖುಷ್ ಹುವಾ’ ಎಂಬ ಡೈಲಾಗ್ ಎಲ್ಲಾ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇಂದು ಅಮರೀಶ್ ಪುರಿಯವರ 87ನೇ ಜನ್ಮದಿವಾಗಿದ್ದು, ಅವರ ಜನ್ಮದಿನದ ಪ್ರಯುಕ್ತವಾಗಿ ಗೂಗಲ್ ತನ್ನ ಡೂಡಲ್ ನಲ್ಲಿ ಅವರ ಪೋಟೋವನ್ನು ಹಾಕುವ ಮೂಲಕ ಗೌರವವನ್ನು ಸಲ್ಲಿಸಿದೆ.

ಕನ್ನಡ ಅಲ್ಲದೇ ಹತ್ತಕ್ಕೂ ಅಧಿಕ ಭಾಷೆಯಲ್ಲಿ ನಟಿಸಿರುವ ಅವರು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು. ಜೂನ್.22, 1932ರಂದು ಜನಿಸಿದ ಅಮರೀಶ್ ಪುರಿ ಅವರು ತಮ್ಮ 39ನೇ ವಯಸ್ಸಿನಲ್ಲಿ ಸಿನಿಮಾ ರಂಗವನ್ನು ಪ್ರವೇಶಿಸಿದರು.