ಬೆಂಗಳೂರು(ಸೆ.09) ವಾಹನ ಸವಾರರಿಗೆ ಸಿಹಿಸುದ್ದಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ದರ ಮತ್ತೆ ಇಳಿಕೆಯಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ.

ದಿನದಿಂದ ದಿನ ತೈಲ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 74.16 ರೂ. ಮತ್ತು ಡೀಸೆಲ್ ದರ 67.03 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ದರ 71.71 ರೂ. ಇದ್ದರೆ, ಡೀಸೆಲ್ ದರ 65.09 ರೂ.ಗೆ ತಲುಪಿದೆ.

ಚೆನ್ನೈನಲ್ಲಿ ಪೆಟ್ರೋಲ್ ದರ 74.51 ರೂ. ಡೀಸೆಲ್ ದರ 68.79 ರೂ. ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 74.44 ರೂ. ಮತ್ತು ಡೀಸೆಲ್ ದರ 67.50 ರೂ. ಇದೆ. ಅಲ್ಲದೇ ಮುಂಬೈನಲ್ಲಿ ಕೂಡ ಲೀಟರ್ ಪೆಟ್ರೋಲ್ ದರ 77.40 ರೂ. ಡೀಸೆಲ್ ದರ 68.26 ರೂ. ಇದೆ.