(ಸೆಪ್ಟೆಂಬರ್.೨೦) ವಿಶ್ವದಾದ್ಯಂತ ಸುಮಾರು 1.5 ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ತನ್ನ ಎಲ್ಲಾ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.

ಈಗಾಗಲೇ ವಾಟ್ಸಪ್ ನಲ್ಲಿ ಅನೇಕ ಫೀಚರ್ಸ್ ಗಳು ಇವೆ. ಅದರ ಜೊತೆಗೆ ಇನ್ನಷ್ಟು ಹೊಸ ಹೊಸ ಫೀಚರ್ಸ್ ಗಳನ್ನು ಸೇರಿಸಲು ಮುಂದಾಗಿದೆ. ಬೇರೆಯವರ ವಾಟ್ಸಪ್ ಸ್ಟೇಟಸ್ ನೋಡಲು ಇಚ್ಛಿಸದಿರುವವರಿಗೆ ಅದನ್ನು ಮ್ಯೂಟ್ ಮಾಡಲು ಹೊಸ ಫೀಚರ್ ಅನ್ನು ಪರಿಚಯಿಸಲು ವಾಟ್ಸಪ್ ಸಜ್ಜಾಗಿದೆ. ವಾಟ್ಸಪ್ ಸ್ಟೇಟಸ್ ಗಳನ್ನು ಮ್ಯೂಟ್ ಮಾಡಿದ ನಂತರ ಅದು ಕಾಣದಂತೆ ಮಾಡಬಹುದಾಗಿದೆ. ಅಂತಹ ಫೀಚರ್ ನ್ನು ವಾಟ್ಸಪ್ ನಲ್ಲಿ ಪರಿಚಯಿಸಲು ಮುಂದಾಗಿದೆ.

ಇದರನ್ವಯ ನೀವು ಯಾವುದೇ ವ್ಯಕ್ತಿಯ ಸ್ಟೇಟಸ್ ಮ್ಯೂಟ್ ಮಾಡಿದರೆ ಅದು ನಿಮಗೆ ಕಾಣುವುದಿಲ್ಲ. ಈ ಮೂಲಕ ನೀವು ಯಾರದೇ ಸ್ಟೇಟಸ್ ಅನ್ನು ಸಂಪೂರ್ಣವಾಗಿ ಇಗ್ನೋರ್ ಮಾಡಬಹುದಾಗಿದೆ. ಸದ್ಯ ಫೀಚರ್ ವಾಟ್ಸಪ್ ಬೀಟಾ ವರ್ಷನ್ ನಲ್ಲಿ ಲಭ್ಯವಿದೆ.