ಚನ್ನೈ:(ಜ16): ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹಾಗೂ ನಟರಾಗಿ ಕರ್ತವ್ಯ ನಿರ್ವಹಿಸಿದ ವಿಶಾಲ್ ಈಗ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರಂತೆ.

ಹೈದರಾಬಾದ್ ಮೂಲದವರಾದ ಅನಿಶಾ ರೆಡ್ಡಿ ಅವರನ್ನು ವರಿಸಲ್ಲಿದ್ದು. ಪ್ರೀತಿಸಿ ವಿವಾಹವಾಗುತ್ತಿರುವ ಈ ಜೋಡಿಗೆ ಎರಡೂ ಕುಟುಂಬದವರ ಒಪ್ಪಿಗೆ ಇದೆ ಅಂತೆ.

ಫೆಬ್ರವರಿಯಲ್ಲಿ ಇವರ ನಿಶ್ಚಿತಾರ್ಥ ಕಾರ್ಯಕ್ರಮ ಹೈದರಾಬಾದ್‍ನಲ್ಲಿ ನಡೆಯಲಿದ್ದು, ನಾಡಿಗರ್ ಸಂಗಮ್ ಕಟ್ಟಡದ ಕೆಲಸ ಸಂಪೂರ್ಣಗೊಂಡ ನಂತರ ಸಪ್ತಪದಿ ತುಳಿಯಲ್ಲಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ನಟ ವಿಶಾಲ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ ಸಪ್ತಪದಿ ತುಳಿಯುತ್ತಿರುವುದು ಸಂತೋಷದ ಸಂಗತಿ.