ಬೆಂಗಳೂರು(ಜ24):ಪ್ರಯಾಣಿಕರಿಗೊಂದು ಸಿಹಿ ಸುದ್ದಿ ಕಾದಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ 200 ಹೆಚ್ಚುವರಿ ಬಸ್ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಂದಾಪುರˌ ಮಂಗಳೂರುˌ ಹಾಸನˌ ಶಿವಮೊಗ್ಗ ˌ ಧರ್ಮಸ್ಥಳˌ ಕುಕ್ಕೆ ಸುಬ್ರಮಣ್ಯˌ ಶೃಂಗೇರಿˌ ಗೋಕರ್ಣˌ ಶಿರಸಿˌ ಕಾರವಾರˌ ರಾಯಚೂರುˌ ಬಳ್ಳಾರಿˌ ಕೊಪ್ಪಳˌ ಯಾದಗಿರಿˌ ಬೀದರ್ˌ ಮೈಸೂರುˌ ಇನ್ನು ಇತರೆ ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಸೌಲಭ್ಯ ಜನವರಿ 25ˌ 26 ಹಾಗೂ 27ರಂದು ಸಿಗಲಿದೆ. ಇನ್ನು ಪ್ರಯಾಣಿಕರು ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ ಕೆ ಎಸ್ಆರ್ ಟಿ ಸಿ ವೆಬ್ ಸೈಟ್ ಸಂಪರ್ಕಿಸಿ ನೋಡಬಹುದು ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಣೆಯಲ್ಲಿ ತಿಳಿಸಿದೆ.