ಹುಬ್ಬಳ್ಳಿ:(ಫೆ23): ಉದ್ಯೋಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೊಂದು ಗುಡ್ ನ್ಯೂಸ್, ಅದೇನಪ್ಪ ಅಂದ್ರೆ ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಇದರಲ್ಲಿ ಉತ್ತರ ಕರ್ನಾಟಕದ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಒಂದು ಅವಕಾಶವನ್ನು ಕಲ್ಪಿಸಲಾಗಿದೆ.

ಈ ಮೇಳವನ್ನು ಉಣಕಲ್ ಶ್ರೀನಗರದಲ್ಲಿನ ಚೇತನ್ ಬ್ಯುಸಿನೆಸ್ ಸ್ಕೂಲ್, ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಕ್ಯಾಂಪಸ್ ಸೆಲೆಕ್ಷನ್ ನಡೆಸುತ್ತಿದ್ದು, ಈ ಬಾರಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬಹುದು.

ಈ ಉದ್ಯೋಗ ಮೇಳ ಫೆ 26, 27, ಹಾಗೂ 28 ರಂದು ನಡೆಯಲಿದ್ದು, ಈ ಮೇಳದಲ್ಲಿ ಬಿಎ, ಬಿಕಾಂ, ಬಿಎಸ್‍ಸಿ, ಬಿಸಿಎ, ಬಿಬಿಎಂ, ಬಿಇ ಸೇರಿದಂತೆ ಇನ್ನು ಇತರೆ ಪದವಿ ಪಡೆದವರು ಇದರಲ್ಲಿ ಭಾಗವಹಿಸಬಹುದು. ಒಟ್ಟಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಗುಡ್ ನ್ಯೂಸ್ ಆಗಿದೆ.