ಬೆಂಗಳೂರು:(ಫೆ23): ಮಂಗಳೂರು ಹಾಗೂ ಬೆಂಗಳೂರಿನ ನಡುವೆ ವಂದೇ ಭಾರತ ಎಕ್ಸ್ ಪ್ರೆಸ್ ರೈಲು ಸಂಚಾರ ಪ್ರಕ್ರಿಯೆ ಆರಂಭಿಸಲಾಗಿದೆ. ಎಂದು ತಿಳಿದು ಬಂದಿದೆ.

ಈ ರೈಲು ಸಂಚಾರವನ್ನು ಮಂಗಳೂರು- ಬೆಂಗಳೂರುˌ ಬೆಂಗಳೂರು – ಹೈದರಾಬಾದ್ˌ ಬೆಂಗಳೂರು -ಚೆನ್ನೈ ನಡುವೆ ವಂದೇ ಭಾರತ ಎಕ್ಸ್ ಪ್ರೆಸ್ ರೈಲು ಸಂಚಾರ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಈ ರೈಲು ಅತ್ಯಾಧುನಿಕ ರೈಲಾಗಿದ್ದುˌಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ದೇಶದಾದ್ಯಂತ ಈ ರೈಲು ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಇದ್ದು ˌಆರು ತಿಂಗಳಲ್ಲಿ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈ-ಫೈ ವ್ಯವಸ್ಥೆಯನ್ನುಒದಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಇನ್ನು ಈ ರೈಲು ಗಂಟೆಗೆ 180 ರಿಂದ 200 ಕಿಲೋಮೀಟರ್ ವೇಗದಲ್ಲಿ ಸಂಚರಿಸುವುದರ ಜೊತೆಗೆ ಪ್ರತಿಯೊಂದು ಸೌಲಭ್ಯವನ್ನು ಕೂಡ ಒಳಗೊಂಡಿರುತ್ತದೆ.