ಬೆಂಗಳೂರು:(ಮಾ06): ಬೆಳ್ಳಿ ತೆರೆಯಲ್ಲಿ ಸುಮಾರು ವರ್ಷಗಳ ನಂತ್ರ ರಾಘವೇಂದ್ರ ರಾಜ್‍ಕುಮಾರ್ ಕಾಣಿಸಿಕೊಳ್ತಾಯಿದ್ದಾರೆ. ನಿಖಿಲ್ ಮಂಜು ನಿರ್ದೇಶನದ “ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟು ಕೊಂಡು ಈ ಕಥೆಯನ್ನು ಬರೆದಿದ್ದೇನೆ, ರಾಘಣ್ಣ ಅವರ ಮೂಲಕ ನನ್ನ ತಂದೆ ಪಟ್ಟಿರುವ ಕಷ್ಟವನ್ನು ತೆರೆ ಮೇಲೆ ತೋರಿಸುತ್ತಿದ್ದೇನೆ ಎಂದು ನಿರ್ದೇಶಕರಾದ ನಿಖಿಲ್ ಮಂಜು ಹೇಳಿದ್ದಾರೆ.

ಈ ಚಿತ್ರದ ಹಾಡುಗಳಿಗೂ ರಾಘಣ್ಣ ಧ್ವನಿ ನೀಡಿದ್ದಾರೆ. ಈ ಚಿತ್ರದಲ್ಲಿ ತಾಯಿ ಮಗನ ಭಾವನಾತ್ಮಕ ದೃಶ್ಯಗಳಿದ್ದು, ಬಿ ಜಯಶ್ರೀಯವರು ರಾಘಣ್ಣನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಕೌಟುಂಬಿಕ ಚಿತ್ರಣವನ್ನು ಬಿಂಬಿಸಲಾಗಿದೆ ಎನ್ನಲಾಗಿದೆ.

ಇನ್ನು ಬೆಳ್ಳಿತೆರೆಯಿಂದ ದೂರವಿದ್ದ ರಾಘಣ್ಣ ಈಗ ಅಮ್ಮನ ಮನೆ ಚಿತ್ರದ ಮೂಲಕ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.