ಬೆಂಗಳೂರು:(ಡಿ27): ಪವನ್ ಒಡೆಯರ್ ನಿರ್ದೇಶನದ ಪುನೀತ್ ರಾಜ್‍ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದ ಆಡಿಯೋ 2019 ಜನವರಿ 05 ರಂದು ಬಿಡುಗಡೆಯಾಗಲಿದೆ.

ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು, ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಮಲೆಯಾಳಂ ನಟಿ ಅನುಪಮ ಪರಮೇಶ್ವರನ್ ಈ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದಾರೆ.

ಸಿನಿಮಾದ ಹಾಡಿಗೆ ಶ್ರೇಯಾ ಘೋಷಲ್ ಹಾಗೂ ವಿಜಯ್ ಪ್ರಕಾಶ್ ಧ್ವನಿಗೂಡಿಸಿದ್ದಾರೆ.

ಈ ಹಾಡುಗಳು ಎಲ್ಲರಿಗೂ ಬಹಳ ಇಷ್ಟವಾಗಲಿವೆ. ಹುಬ್ಬಳ್ಳಿಯಲ್ಲಿ ಅಭಿಮಾನಿ ದೇವರುಗಳ ಕ್ಷಮಕ್ಷಮದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ಸಮಾರಂಭ ನಡೆಯಲಿದೆ. ನಿಮ್ಮ ಆಗಮನವನ್ನು ಬಯಸುವೆ ಎಂದು ಸಿನಿಮಾದ ನಿರ್ದೇಶಕರಾದ ಪವನ್ ಒಡೆಯರ್ ಟ್ವೀಟ್ ಮಾಡಿದ್ದಾರೆ.