ಬೆಂಗಳೂರು:(ಜೂನ್.17): ಇಂದಿನಿಂದ ದೇಶದಲ್ಲಿ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ನೂತನ ಸಂಸದರು ಇಂದು ಸಂಸತ್‍ನಲ್ಲಿ ಪ್ರತಿಜ್ಞಾ ವಿಧಿಸ್ವೀಕರಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ ಸದಾನಂದಗೌಡ 4ನೇಯದಾಗಿ ತಮ್ಮ ಸರದಿ ಬಂದಾಗ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗೆಯೇ ಸಂಸದರಾದ ಪ್ರಹ್ಲಾದ್ ಜೋಷಿ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಲೋಕಸಭೆಯ ಸದಸ್ಯನಾಗಿರುವ ನಾನು ಕಾನೂನು ಮೂಲಕವಾಗಿ ಸ್ಥಾಪಿತವಾಗಿರುವ ಭಾರತದ ಸಂವಿಧಾನಕ್ಕೆ ಸತ್ಯ, ಶ್ರದ್ಧೆ, ನಿಷ್ಠೆಯನ್ನು ಹೊಂದಿರುತ್ತೇನೆ. ಹಾಗೂ ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಈಗ ಕೈಗೊಂಡಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುತ್ತೇನೆಂದು ಸಂಸದರಾ ಡಿ.ವಿ ಸದಾನಂದಗೌಡ ಹಾಗೂ ಸಂಸದರಾದ ಪ್ರಹ್ಲಾದ್ ಜೋಷಿ ಅವರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ್ದಾರೆ. ಇನ್ನೂ ಹೊಸ ಸಂಸದರಿಗೆಲ್ಲರಿಗೂ ಹಂಗಾಮಿ ಸ್ಪೀಕರ್ ವೀರೇದ್ರ ಕುಮಾರ್ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನವನ್ನು ಬೋಧಿಸಿದ್ದಾರೆ.