ಬೆಂಗಳೂರು:( ಜ23): ರೈತರಿಗೊಂದು ಗುಡ್ ನ್ಯೂಸ್ ಕೊಟ್ಟಿದೆ ತೋಟಗಾರಿಕೆ ಇಲಾಖೆ. ಅಂದರೆ ಸ್ವಯಂ ಚಾಲಿತ ತರಕಾರಿ ಬೀಜದ ಯಂತ್ರವನ್ನು ಸ್ಥಾಪಿಸಲಾಗಿದೆ.

ಸ್ವಯಂಚಾಲಿತ ತರಕಾರಿ ಬೀಜದಗಳ ವಿತರಣಾ ಯಂತ್ರವನ್ನು ಜನವರಿ 23 ಅಂದರೆ ಇಂದು ನಡೆಯುವ ತೋಟಗಾರಿಕಾ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಕ್ರುಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ಯಂತ್ರವನ್ನು ಅಳವಡಿಸಲಾಗಿದ್ದು, 36 ವಿವಿಧ ಬಗೆಯ ತರಕಾರಿ ಬೀಜಗಳನ್ನು ಸಾಲಾಗಿ ಜೋಡಿಸಲಾಗಿದೆ.

ರೈತರು 20 ರೂಪಾಯಿ ಈ ಯಂತ್ರಕ್ಕೆ ನೀಡಿ ಬೇಕಾದ ಬೀಜದ ಮೇಲೆ ಕ್ಲಿಕ್ ಮಾಡಿದರೆ ಬೀಜದ ಪ್ಯಾಕೆಟ್ ಯಂತ್ರದ ಕೆಳಭಾಗದಲ್ಲಿ ಬಂದು ಬೀಳುತ್ತದೆ.

ತರಕಾರಿ ಬೀಜಗಳ ವಿಭಾಗದ ವಿಜ್ಞಾನಿ ಡಾ. ಸದಾಶಿವ ಅವರು ಹೇಳಿದಂತೆˌ ರೈತರು ಈ ಸೌಲಭ್ಯವನ್ನು ಬೆಳಗ್ಗೆ 9 ರಿಂದ ಸಂಜೆ 5 ತನಕ ಪಡೆಯಬಹುದು ಎಂದಿದ್ದಾರೆ.