ನವದೆಹಲಿ:(ಜ28): ಕೇಂದ್ರ ಸರ್ಕಾರ ರೈತರಿಗೊಂದು ಬಂಪರ್ ಕೊಡುಗೆಯನ್ನು ಕೊಟ್ಟಿದೆ. ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್ ರೈತರಿಗೆ ಈ ಬಂಪರ್ ಕೊಡುಗೆಯ ಅವಕಾಶ ಸಿಕ್ಕಿದೆ.

ಕೇಂದ್ರ ಸರ್ಕಾರವು 6680 ಕೋಟಿ ರೂ ಬರಪೀಡಿತ ರಾಜ್ಯಗಳಿಗೆ ಅನುಮೋದನೆಯನ್ನು ನೀಡಿದೆ. ಕರ್ನಾಟಕಕ್ಕೆ 950 ಕೋಟಿ, ಆಂಧ್ರಪ್ರದೇಶಕ್ಕೆ 900 ಕೋಟಿ, ಮಹಾರಾಷ್ಟ್ರಕ್ಕೆ 4700 ಕೋಟಿ ರೂ, ಗುಜರಾತಿಗೆ 130 ಕೋಟಿ ರೂ, ಈ ಪ್ಯಾಕೇಜ್ ಮೂಲಕ ನೀಡಲಾಗಿದೆ.

ಕೆಲವು ತಿಂಗಳ ಹಿಂದೆ ಕೇಂದ್ರದ ಅಧಿಕಾರಿಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಈಗ ಬರಪೀಡಿತ ನಾಲ್ಕು ರಾಜ್ಯಗಳ ರೈತರಿಗೆ ಕೇಂದ್ರ ಬಂಪರ್ ಕೊಡುಗೆ ಕೊಟ್ಟಿದೆ.