ನವದೆಹಲಿ(ಜೂನ್.15) ಆಧಾರ್ ಕಾರ್ಡನ್ನು ತಪ್ಪಾಗಿ ಬಳಕೆ ಮಾಡುವಂತಿಲ್ಲ. ತಪ್ಪಾಗಿ ಬಳಕೆ ಮಾಡಿದರೆ ಅದು ಅಪರಾಧ. ಇದು ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಸಚಿವ ಸಂಪುಟ ಮಹತ್ವದ ಮಸೂದೆ ಪಾಸ್ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬ್ಯಾಂಕ್ ಖಾತೆ ತೆರೆಯಲು, ಸಿಮ್ ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಗ್ರಾಹಕರು ಸ್ವಯಂಪ್ರೇರಿತವಾಗಿ ಆಧಾರ್ ಅನ್ನು ಪುರಾವೆಯಾಗಿ ಬ್ಯಾಂಕ್ ಮತ್ತು ಟೆಲಿಕಾಂ ಕಂಪನಿಗಳಿಗೆ ನೀಡಬಹುದಾಗಿದೆ.

ಸಿಮ್ ಕಾರ್ಡ್ ಖರೀದಿಸುವಾದ ಅಥವಾ ಬ್ಯಾಂಕುಗಳಲ್ಲಿ ಖಾತೆಯನ್ನು ತೆರೆಯುವಾಗ ಆಧಾರ್ ಕಾರ್ಡನ್ನು ಕೇಳಿದರೆ ಅದನ್ನು ತಿರಸ್ಕರಿಸುವ ಹಕ್ಕು ನಿಮಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಕಡ್ಡಾಯವೆಂದು ಒತ್ತಾಯ ಮಾಡಿದರೆ ಕೋರ್ಟ್‍ಗೆ ಮೊರೆ ಹೋಗಬಹುದು. ಆಧಾರ್ ಕಾರ್ಡ್ ತಪ್ಪಾಗಿ ಬಳಕೆ ಮಾಡುವುದು ಕಂಡುಬಂದಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೂನ್ 17ರಿಂದ ಪ್ರಾರಂಭವಾಗುವ ಸಂಸತ್ತಿನ ಮೊದಲ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ಪರಿಚಯಿಸಲಿದೆ. ಖಾಸಗಿ ಸಂಸ್ಥೆಗಳು ಆಧಾರ್ ಬಳಸಲು ಅನುಮತಿಯ ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ತೆಗೆದು ಹಾಕಲು ಮಸೂದೆ ಪ್ರಸ್ತಾಪಿಸಿದೆ.