ಬೆಂಗಳೂರು:(ಜ29): ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದು ಬಂದಿದೆ.

ಶತಾಬ್ದಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಈ ರೈಲಿನಲ್ಲಿ 14 ಬೋಗಿಗಳಿದ್ದು, 07 ಎಸಿ ಕೋಚ್ ಇವೆ ಎನ್ನಲಾಗಿದೆ.

ಸೋಮವಾರ, ಬುಧವಾರ, ಶುಕ್ರವಾರ, ಸಂಚಾರ ನಡೆಸಲಿದೆ. ಅಂದರೆ ಶಿವಮೊಗ್ಗದಿಂದ ಶನಿವಾರ ಬೆಳಗ್ಗೆ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಿಂದ ಬೆಳಗ್ಗೆ 5.30 ತಕ್ಕೆ ಹೊರಟು, 10 ಗಂಟೆಗೆ ರೈಲು ಬೆಂಗಳೂರಿಗೆ ತಲುಪಲಿದೆ. ಪುನಃ ಬೆಂಗಳೂರಿನಿಂದ ಸಂಜೆ 5.30 ತಕ್ಕೆ ಹೊರಟು, ಶಿವಮೊಗ್ಗಕ್ಕೆ ರಾತ್ರಿ 10 ಗಂಟೆಗೆ ತಲುಪಲಿದೆ.

ಒಟ್ಟಿನಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ಸಂತಸದ ಸಂಗತಿ.