ನವದೆಹಲಿ(ಮಾ:22): ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಇಂದು ಬಿಜೆಪಿ ಗೆ ಸೇರ್ಪಡೆಯಾಗಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರ ಸಮ್ಮುಖದಲ್ಲಿ ಗೌತಮ್ ಗಂಭೀರ್ ಬಿಜೆಪಿಗೆ ಸೇರ್ಪಡೆಗೊಂಡಿದ್ದು,ಅವರನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳಲಾಗಿದೆ.

ಗಂಭೀರ್ ಅವರು ಆಮ್ ಆದ್ಮಿ ಪಕ್ಷದ ನಿಲುವಿನ ಬಗ್ಗೆ ಆಗಾಗ ವಿರೋಧ ಹೊರ ಹಾಕ್ತಿದ್ದರು. ಅವರ ಈ ವಿರೋಧಿ ಹೇಳಿಕೆಗಳು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಗಂಭೀರ್ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಆ ಮಾತುಗಳೀಗ ನಿಜವಾಗಿವೆ.

2014ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಏಳೂ ಸೀಟುಗಳು ಬಿಜೆಪಿ ವಶವಾಗಿದ್ದವು. ಆದರೆ ಈ ಬಾರಿ ಕೆಲ ಸೀಟುಗಳನ್ನು ಬಿಜೆಪಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಹಾಗಾಗಿ ಗೆಲುವಿನ ಕುದುರೆಗೆ ಬಿಜೆಪಿ ಹುಡುಕಾಟ ನಡೆಸುತ್ತಿದ್ದು, ಹೀಗಾಗಿ ಗೌತಮ್ ಗಂಭೀರ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಾಗಿದೆ.