ಬೆಂಗಳೂರು(ಜೂನ್.12) ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೂನ್.21ರಿಂದ ಗ್ರಾಮ ವಾಸ್ತವ್ಯವನ್ನು ಹೂಡಲಿದ್ದಾರೆ. ಮೊದಲಿಗೆ ಯಾದಗಿರಿ ಜಿಲ್ಲೆಯ ಗುರುವಿಠ್ಠಲ್ ತಾಲ್ಲೂಕಿನ ಚಂಡರಕಿ ಗ್ರಾಮದಿಂದ ಆರಂಭವಾಗಲಿದೆ.

ಈ ಹಿನ್ನೆಲೆಯಲ್ಲಿ ಪಯಣದ ಸಂಪೂರ್ಣ ಸಿದ್ದತೆಯನ್ನು ಈಗಾಗಲೇ ತಯಾರಿಸಲಾಗಿದೆ. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ತಾತ್ಕಾಲಿಕ ಚಾರ್ಟ್ ರೆಡಿಯಾಗಿದೆ.

ಮೊದಲಿಗೆ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಕೈಗೊಳ್ಳಲಾಗುವ ಗ್ರಾಮ ವಾಸ್ತವ್ಯದ ತಾತ್ಕಾಲಿಕ ಪ್ರವಾಸದ ಕಾರ್ಯಕ್ರಮ ಜೂನ್.20, 2019ರ ಗುರುವಾರದಿಂದ ಆರಂಭವಾಗಲಿದೆ. ಜೂನ್.20ರಂದು ಗುರುವಾರ ಬೆಳಿಗ್ಗೆ 7.20ಕ್ಕೆ ಕರ್ನಾಟಕ ಎಕ್ಸ್ ಮೂಲಕ ಯಾದಗಿರಿ ತಲುಪಲಿದ್ದಾರೆ.

ದಿನಾಂಕ 21-06-2019 ಮೊದಲ ದಿನದ ಗ್ರಾಮ ವಾಸ್ತವ್ಯ:

ಮೊದಲ ದಿನ ಕುಮಾರಸ್ವಾಮಿಯವರು 7.30ಕ್ಕೆ ಯಾದಗಿರಿಯಿಂದ ರಸ್ತೆ ಸಂಚಾರದ ಮೂಲಕ ಹೊರಟು ಯಾದಗಿರಿ ಜಿಲ್ಲೆಯ ಗುರುವಿಠ್ಠಲ್ ತಾಲ್ಲೂಕಿನ ಚಂಡರಕಿ ಗ್ರಾಮಕ್ಕೆ 10 ಗಂಟೆಗೆ ತಲುಪಲಿದ್ದಾರೆ. 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಂಡರಕಿ ಗ್ರಾಮದಲ್ಲಿ ಜನತಾದರ್ಶನ ನಡೆಯಲಿದೆ. ಈ ಮೂಲಕ ಸಾರ್ವಜನಿಕರ ಕುಂದು-ಕೊರತೆಯನ್ನು ಆಲಿಸಲಿದ್ದಾರೆ.

ರಾತ್ರಿ 6.30ರಿಂದ 8.30ರವರೆಗೆ ರೈತರಿಗೆ ಅಧಿಕಾರಿಗಳಿಂದ ಮಾಹಿತಿ ಕೊಡಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿ ಮೊದಲ ದಿನದ ವಾಸ್ತವ್ಯ ಮಾಡಲಿದ್ದಾರೆ.

ದಿನಾಂಕ 22-06-2019 ಎರಡನೇ ದಿನದ ಗ್ರಾಮ ವಾಸ್ತವ್ಯ:

ಎರಡನೇ ದಿನದ ಗ್ರಾಮ ವಾಸ್ತವ್ಯವನ್ನು ಕಲಬುರಗಿ ಜಿಲ್ಲೆಯ ಅಫ್ಜಲ್ ಪುರ ತಾಲ್ಲೂಕಿನ ಹೆರೂರು ಬಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 7.30ಕ್ಕೆ ಕಾಲುನಡಿಗೆಯ ಮೂಲಕ 10 ಗಂಟೆಗೆ ಹೆರೂರು ಗ್ರಾಮವನ್ನು ತಲುಪಿ ನಂತರ ಸಂಜೆ 6 ಗಂಟೆಯವರೆಗೂ ಜನತಾದರ್ಶನದ ಮೂಲಕ ಜನರ ಕುಂದು-ಕೊರತೆಗಳನ್ನು ಆಲಿಸಲಿದ್ದಾರೆ.

ರಾತ್ರಿ 6.30ರಿಂದ ರೈತರಿಗೆ ಮಾಹಿತಿ ಒದಗಿಸುವ ಕಾರ್ಯಕ್ರಮ ನಡೆಯಲಿದೆ. ನಂತರ ಸ್ಥಳೀಯ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ವಿಕ್ಷೀಸಲಿದ್ದಾರೆ. ರಾತ್ರಿ 8 ಗಂಟೆಗೆ ಶಿಕ್ಷಕರು ಮತ್ತು ಮಕ್ಕಳ ಜೊತೆ ಭೋಜನ ವ್ಯವಸ್ಥೆಯಲ್ಲಿ ಭಾಗಿಯಾಗಲಿದ್ದಾರೆ.