ಜಯಪುರ್ (ಡಿ ೨೦): ಭಾರತ ತಂಡದ ಮಾಜಿ ನಾಯಕ ೩೫ ವರ್ಷದ ಅನೂಪ್ ಕುಮಾರ್ ಕಬಡ್ಡಿಗೆ ವಿದಾಯ ಹೇಳಿದ್ದಾರೆ . ಪ್ರಸ್ತುತ ಪ್ರೊ ಕಬಡ್ಡಿ ಲೀಗ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಪರ ಆಡುತ್ತಿದ್ದ ಅನೂಪ್ ತಮ್ಮ ೧೫ ವರ್ಷದ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದಾರೆ . ೨೦೧೦ ಮತ್ತು ೨೦೧೪ ರ ಏಶಿಯನ್ ಗೇಮ್ಸ್ ನಲ್ಲಿ ತಮ್ಮ ನಾಯಕತ್ವದ ಮೂಲಕ ೨ ಚಿನ್ನ ಗೆದ್ದುಕೊಟ್ಟಿದ್ದ ಅವರು ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸುತ್ತಿದ್ದರು . ಇದೀಗ ಅವರ ವೃತ್ತಿ ಬದುಕಿಗೆ ವಿದಾಯ ಹೇಳಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ .