ಆನೇಕಲ್(ಜ:07):ಗ್ರಾಮಕ್ಕೆ ನುಗ್ಗಿದ ಆನೆಯನ್ನು ಓಡಿಸಲು ಮುಂದಾದ ಫಾರೆಸ್ಟ್ ವಾಚರ್ ನನ್ನು ಆನೆ ತುಳಿದು ಸಾಯಿಸಿರುವ ಘಟನೆ ತಮಿಳುನಾಡು ರಾಜ್ಯದ ಡೆಂಕಣಿಕೋಟೆಯಲ್ಲಿ ನಡೆದಿದೆ.

ನಿನ್ನೆ ಡೆಂಕಣಿಕೋಟೆ ಗ್ರಾಮಕ್ಕೆ ಕಾಡಾನೆಗಳು ನುಗ್ಗಿದ್ದವು, ಆಗ ಅವುಗಳನ್ನು ಕಾಡಿಗಟ್ಟಲು ಮುಂದಾದಾಗ ಮಾರಪ್ಪನ್(40) ಅವರು ಆನೆ ದಾಳಿಗೊಳಗಾಗಿ ಮೃತಪಟ್ಟಿದ್ದಾರೆ.

ಡೆಂಕಣಿಕೋಟೆ ಗ್ರಾಮದ ಯುವಕನೋರ್ವ ಆನೆಗೆ ಕಲ್ಲಿನಿಂದ ಹೊಡೆದಿದ್ದಾನೆ, ಇದರಿಂದ ಕೆರಳಿದ ಆನೆ ಫಾರೆಸ್ಟ್ ವಾಚರ್ ನನ್ನು ತುಳಿದು ಸಾಯಿಸಿದೆ ಎನ್ನಲಾಗಿದೆ.