ಮುಂಬೈ(ಜೂ.03): ಜಾನಪದ ನೃತ್ಯಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಹರೀಶ್ ಕುಮಾರ್ ಸೇರಿದಂತೆ ನಾಲ್ವರು ಭೀಕರ ರಸ್ತೇ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

ಭಾನುವಾರ ಮುಂಜಾನೆ ಎಸ್‍ಯುವಿ ಕಾರಿನಲ್ಲಿ ಅಜ್ಮೀರದಿಂದ ತೆರಳುತ್ತಿದ್ದ ವೇಳೆ ಟ್ರಕ್‍ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್ ಹಾಗೂ ಅವರ ಜೊತೆ ಇದ್ದವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ದುರಂತ ನಡೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಇನ್ನು ಹರೀಶ್ ಕ್ವೀನ್ ಹರೀಶ್ ಎಂದೇ ಪ್ರಸಿದ್ಧಿಯಾಗಿದ್ದವರು. ಗ್ಲೋಮರ್, ಕಲ್ಬೆಲಿಯಾ, ಚಾಂಗ್, ಭವಾಯ್ ಚರಿ ಸೇರಿದಂತೆ ನೃತ್ಯಗಳಲ್ಲಿ ಪರಿಣಿತಿ ಹೊಂದ್ದಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ.