ಬೆಂಗಳೂರು(ಆಗಸ್ಟ್.13)ಸರ್ಕಾರ ಕಳೆದ ತಿಂಗಳು ರಚನೆಯಾದರೂ ಇಂದಿಗೂ ಮುಖ್ಯಮಂತ್ರಿಯವರು ಸಚಿವ ಸಂಪುಟವನ್ನು ರಚಿಸದ ಕಾರಣ ಸ್ವಾತಂತ್ರ್ಯ ದಿನಾಚರಣೆಯ ದ್ವಜರೋಹಣ ವನ್ನು ಅಧಿಕಾರಿಗಳಿಂದಲೇ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ.

ನೆರೆಯ ಕಾರಣದಿಂದ ಆಗಸ್ಟ್ 15 ರಂದು ಸರಳ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.ಮುಖ್ಯಮಂತ್ರಿ ಆಗಿ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿ ತಿಂಗಳಾಗುತ್ತಾ ಬಂದರೂ ಮಂತ್ರಿಮಂಡಲ ರಚನೆ ಮಾಡದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.ಕೇಂದ್ರದ ಒಪ್ಪಿಗೆಗೆ ಹೊಸ ಸರ್ಕಾರ ಕಾಯುತ್ತಿದೆ