ವಿಲ್ಲಿಂಗ್ಟನ್(ಮಾ​:15): ನ್ಯೂಜಿಲ್ಯಾಂಡ್ ನ ಕ್ರೈಸ್ಟ್​ಚರ್ಚ್​ ನಗರದಲ್ಲಿ ಶುಕ್ರವಾರ ಬೆಳಗ್ಗೆ ಮಸೀದಿಯೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಬಂದೂಕಿನಿಂದ ಮನಬಂದಂತೆ ಗುಂಡುಹಾರಿಸಿದ್ದು, ಸ್ಥಳದ್ಲಲೇ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾವಿನ ಸಂಖ್ಯೆ ಇನ್ನೂ ನಿಖರವಾಗಿಲ್ಲ. ಪೊಲೀಸರು ಶೂಟೌಟ್​ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಇನ್ನಷ್ಟು ಬಂದೂಕುಧಾರಿಗಳು ಮಸೀದಿಯೊಳಗೆ ಇರಬಹುದೆಂದು ಶಂಕಿಸಲಾಗಿದೆ. ಇದು ನ್ಯೂಜಿಲ್ಯಾಂಡ್​ ಇತಿಹಾಸದಲ್ಲೇ ಕರಾಳದಿನ ಎಂದು ಪ್ರಧಾನಿ ಜಸಿಂದ ಅರ್ಡೆನ್​ ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್​ ಪೊಲೀಸ್​ ಆಯುಕ್ತರಾದ ಮೈಕ್​ ಬುಶ್​ ಅವರು ಘಟನೆಯ ಕುರಿತು ಒಂದು ವಿಡಿಯೊ ಪ್ರಕಟಿಸಿದ್ದು, ಸಾರ್ವಜನಿಕರು ಹೆದರದಂತೆ ಧೈರ್ಯ ಹೇಳಿದ್ದಾರೆ. ಈವರೆಗೆ ಒಬ್ಬ ಬಂದೂಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ. ಮಸೀದಿಯೊಳಗೆ ಇನ್ನೂ ಎಷ್ಟು ಜನ ದುಷ್ಕರ್ಮಿಗಳಿದ್ದಾರೋ ತಿಳಿಯುತ್ತಿಲ್ಲ. ಪರಿಸ್ಥಿತಿ ತಹಬದಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.