ಬೆಂಗಳುರು:(ಫೆ23): ಬೆಂಗಳೂರಿನ ಯಲಹಂಕ ವಾಯುನಲೆಯಲ್ಲಿ ಏರ್ ಶೋ ನಡೆಯುವ ವೇಳೆ ಅಗ್ನಿ ದುರಂತ ಸಂಭವಿಸಿದೆ. ಸುಮಾರು 150ಕ್ಕೂ ಹೆಚ್ಚು ಕಾರುಗಳು ಹೊತ್ತಿ ಉರಿದಿವೆ.

ಯಲಹಂಕ ವಾಯುನೆಲೆಯ ಗೇಟ್ ನಂ 5 ರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆ ಮುಚ್ಚಿದ ವಾತಾವರಣ ಸೃಷ್ಟಿಯಾಗಿದೆ. ಒಣ ಹುಲ್ಲಿಗೆ ಬೆಂಕಿ ತಾಗಿದ್ದರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ಬೆಂಕಿ ನಂದಿಸಲು 10 ಕ್ಕೂ ಹೆಚ್ಚಿನ ಅಗ್ನಿಶಾಮಕ ದಳಗಳದ ವಾಹನಗಳು ಬಂದಿದ್ದು, ಬೆಂಕಿಯನ್ನು ನಂದಿಸುವ ಕಾರ್ಯ ಮುಂದುವರೆದಿದೆ. ಇದರಿಂದ ಏರ್ ಶೋವನ್ನು ಸ್ಥಗಿತಗೊಳಿಸಲಾಗಿದೆ.