ಬೆಂಗಳೂರು(ಜೂನ್.06) ಬೆಂಗಳೂರಿನ ಮೆಟ್ರೋದಲ್ಲಿ ಮತ್ತೊಂದು ಕಳಪೆ ಪ್ರಮಾಣದ ಕಾಮಗಾರಿಯು ನಡೆದಿದೆ. ಮೆಜೆಸ್ಟಿಕ್ ನಲ್ಲಿರುವ ಮೆಟ್ರೋ ಸ್ಟೇಷನ್ ನಲ್ಲಿ ಈ ರೀತಿಯ ಕಳಪೆ ಕಾಮಗಾರಿ ನಡೆದಿದೆ.

ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಇಷ್ಟು ದಿನ ಸುರಂಗ ಮಾರ್ಗದಲ್ಲಿ ನೀರು ಸೋರಿಕೆ ಆಗುತ್ತಿತ್ತು. ಈಗ ಸ್ಟೇಷನ್ ಟಿಕೆಟ್ ಕೌಂಟರ್ ಬಳಿಯೂ ನೀರು ನೀರು ಸೋರಿಕೆಯಾಗುತ್ತಿದೆ.

ರಾತ್ರಿ ಮಳೆಯಿಂದ ಸುರಂಗ ಹೊರತುಪಡಿಸಿ ಅಲ್ಲಲ್ಲಿ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ನೀರು ಸೋರಿಕೆಯಿಂದ ಮೆಟ್ರೋ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅತ್ಯಾಧುನಿಕ ಸ್ಟೇಷನ್ ಒಳಗೆ ಕಳಪೆ ಪ್ರಮಾಣದ ಕಾಮಗಾರಿ ಆಗಿರುವುದರಿಂದ ಗುತ್ತಿಗೆದಾರರ ಮೇಲೆ BMRCL ಆರೋಪ ಮಾಡಿದೆ.