ಬೆಂಗಳೂರು:(ಫೆ23): ಕನ್ನಡ ಚಿತ್ರರಂಗದಲ್ಲಿ ಹಿಂದೆ ಖ್ಯಾತ ನಟಿ ಎಂದೇ ಹೆಸರು ಪಡೆದಿರುವ ವಿಜಯಲಕ್ಷ್ಮಿ ಅವರು ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಹಣಕಾಸಿನ ನೆರವು ನೀಡಲು ಫಿಲ್ಮ್ ಚೇಂಬರ್ ಮುಂದಾಗಿದೆ.

ಕನ್ನಡ ಚಿತ್ರರಂಗದಲ್ಲಿ ನಟಿ ವಿಜಯಲಕ್ಷ್ಮಿಯವರು ನಾಗಮಂಡಲ, ಭೂಮಿತಾಯಿಯ ಚೊಚ್ಚಲ ಮಗ, ಅರುಣೋದಯ, ರಂಗಣ್ಣ, ಇನ್ನು ಇತರ ಚಿತ್ರಗಳಲ್ಲಿ ನಟಿಸಿದ್ದು, ಈಗ ನಟಿ ವಿಜಯಲಕ್ಷ್ಮಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಈಗಾಗಲೇ ಅವರ ಕುಟುಂಬ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು,ಕೆಲವು ದಿನಗಳ ಹಿಂದೆ ಅವರ ತಾಯಿಯನ್ನು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ನಟಿ ವಿಜಯಲಕ್ಷ್ಮಿಯವರು ಅನಾರೋಗ್ಯದಿಂದ ಮಲ್ಯ ಆಸ್ಪತ್ರೆ ಸೇರಿದ್ದಾರೆ. ಹಣಕಾಸಿನ ಸಮಸ್ಯೆಯಿದ್ದ ಕಾರಣದಿಂದ ಚಿತ್ರರಂಗದ ನೆರವು ಬೇಕಿದೆ ಎಂದು ಸಹೋದರಿ ಉಷಾ ಹೇಳಿದ್ದರು, ಇದರಿಂದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಭಾ.ಮಾ. ಹರೀಶ್, ಗಿರೀಶ್ ಇನ್ನೂ ಚಿತ್ರರಂಗದ ಹಲವರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಹಣಕಾಸಿನ ನೆರವಿಗೆ ಮುಂದಾಗಿದ್ದಾರೆ.