ಮುಂಬೈ:(ಜ12): ಸುರಸುಂದರಿ ಎಂದೇ ಹೆಸರುಗಳಿಸಿ ತೆಲುಗು ಸಿನಿಮಾದ ಮೂಲಕ ಸಿನಿ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ ಶ್ರೀದೇವಿ ಅವರು ಬಾಲಿವುಡ್, ಮಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್, ಸಿನಿ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿ ಮೆಚ್ಚುಗೆಗೆ ಪಾತ್ರವಾದ ಶ್ರೀದೇವಿಯ ಜೀವನ ಚರಿತ್ರೆ ಸಿನಿಮಾ ಆಗಿ ಹೊರ ಬರಲಿದೆ.

ಕಳೆದ ವರ್ಷ ಸಂಬಂಧಿಕರ ಮದುವೆಯ ಸಮಾರಂಭಕ್ಕೆ ಹೋದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಅಲ್ಲಿಯೇ ಪ್ರಾಣಬಿಟ್ಟಿದ್ದು, ದುಃಖದ ಸಂಗತಿಯಾಗಿದೆ. ಇವರು ಮರೆಯಲಾಗದ ನೆನಪೊಂದು ಸಿನಿಕ್ಷೇತ್ರದಲ್ಲಿ ಬಿಟ್ಟು ಹೋಗಿದ್ದಾರೆ.

ಇದೀಗ ಶ್ರೀದೇವಿಯವರ ಪತಿ ಬೋನಿ ಕಪೂರ್ ಕೂಡ ಶ್ರೀದೇವಿಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದಾಗಿ ಹೇಳುವುದರ ಜೊತೆಗೆ ಪುಸ್ತಕವೊಂದನ್ನು ಹೊರತರುವ ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.