ಸಂಸ್ಥೆಯು ಇಂದಿಗೆ ಆರು ವರ್ಷಗಳನ್ನು ಪೂರೈಸಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ತನ್ನ ಸಂಭ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಂಡಿದೆ.

ಇದರ ಪ್ರಯುಕ್ತ ಬೆಂಗಳೂರಿನ ಬನಶಂಕರಿಯ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕ್ ನಲ್ಲಿರುವ ಫಿಡಿಲಿಟಸ್ ಕಾರ್ಪ್ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೂ ಮುನ್ನ ತಮ್ಮ ಸಿಬ್ಬಂದಿಯೊಂದಿಗೆ ಸಂಭ್ರಮ ಹಂಚಿಕೊಂಡ ಫಿಡಿಲಿಟಸ್ ಕಾರ್ಪ್ ಸಂಸ್ಥೆಯ ವ್ಯವಸ್ಥಾಪಕ, ಸಂಸ್ಥಾಪಕರಾದ ಅಚ್ಚುತ್ ಗೌಡ ಅವರು ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಭರವಸೆಯ ಮಾತುಗಳನ್ನು ಆಡಿದರು.

ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ಸಂಚಾರ ವಿಭಾಗದ ಎಸಿಪಿ ರಮೇಶ್ ಕೆಎನ್ ಹಾಗೂ ಕರಿಸಂದ್ರ ವಾರ್ಡ್ ನಂಬರ್ 166ರ ಬಿಬಿಎಂಪಿ ಸದಸ್ಯರಾದ ಯಶೋಧ ಲಕ್ಷ್ಮಿಕಾಂತ್ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸಿಪಿ ರಮೇಶ್ ಅವರು, ಫಿಡಿಲಿಟಸ್ ಕಾರ್ಪ್ ಉತ್ತಮ ಕೆಲಸವನ್ನು ಮಾಡುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಅಲ್ಲದೇ ಪರಿಸರ ಕಾಳಜಿ ಮೂಡಿಸುವ ಕವನ ಹೇಳುವುದರ ಜೊತೆಗೆ ದೆಹಲಿ ವಾಯುಮಾಲಿನ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ನಮ್ಮ ಬೆಂಗಳೂರು ಅದೇ ರೀತಿ ಆಗದಂತೆ ನಮ್ಮ ನಗರವನ್ನು ಕಾಪಾಡಿಕೊಳ್ಳಬೇಕು ಎಂದರು.

ಬಳಿಕ ಮಾತನಾಡಿದ ಬಿಬಿಎಂಪಿ ಸದಸ್ಯೆ ಯಶೋಧ ಅವರು ಹಸಿರು ಗಿಡ ಬೆಳೆಸುವಂತಹ ಒಳ್ಳೆಯ ಕೆಲಸವನ್ನು ಫಿಡಿಲಿಟಸ್ ಸಂಸ್ಥೆ ಮಾಡುತ್ತಿದೆ. ಇಂಥಾ ಕಾರ್ಯಗಳನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.